NCP chief Sharad Pawar

NDAಯತ್ತ ಶರದ್ ಪವಾರ್ ಚಿತ್ತ? "ಆಪರೇಷನ್ ಘಡಿ"ಗೆ ಫಡ್ನವೀಸ್ ಮಾಸ್ಟರ್ ಪ್ಲಾನ್!
ಏಕನಾಥ್ ಶಿಂಧೆ ಜೊತೆ ಸೇರಿ ಆಪರೇಷನ್ ಟೈಗರ್ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ 6 ಲೋಕಸಭಾ ಸಂಸದರನ್ನು ತನ್ನತ್ತ ಸೆಳೆದಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇದೀಗ ಮಹಾ ರಾಜಕೀಯದಲ್ಲಿ ಮತ್ತೊಂದು ಆಪರೇಷನ್‌ಗೆ ಮುಂದಾಗಿದ್ದು, ಈ ಬಾರಿ ಅವರ ಟಾರ್ಗೆಟ್ NCP!

ನಾಳೆ ದೆಹಲಿಯಲ್ಲಿ INDIA ಬಣ ನಾಯಕರ ಸಭೆ-ಶರದ್ ಪವಾರ್
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ನಿರೀಕ್ಷಿತ ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದು, ಸರ್ಕಾರ ರಚನೆಯಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೆಳೆಯಲು ಬಿಜೆಪಿ ಹಾಗೂ ವಿಪಕ್ಷಗಳ ಮೈತ್ರಿಕೂಟದ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

'ಕಾಂಗ್ರೆಸ್ ಜೊತೆ ಸಾಯೋ ಬದಲು ಅಜಿತ್, ಶಿಂಧೆ ಜೊತೆ ಸೇರಿಕೊಳ್ಳಿ': ಪವಾರ್, ಉದ್ಧವ್ ಗೆ ಪ್ರಧಾನಿ ಮೋದಿ ಸಲಹೆ
ಜೂನ್ 4 ರ ಲೋಕಸಭೆ ಚುನಾವಣೆ ಫಲಿತಾಂಶದ ನಂತರ "ನಕಲಿ ಎನ್‌ಸಿಪಿ ಮತ್ತು ಶಿವಸೇನೆ" ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ಮನಸ್ಸು ಮಾಡಿವೆ, ಆದರೆ ಅಲ್ಲಿ ಕಾಂಗ್ರೆಸ್ ಜೊತೆ ವಿಲೀನವಾಗುವ ಬದಲು ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಜೊತೆ ಸೇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಔತಣಕೂಟಕ್ಕೆ ಶಿಂಧೆ, ಫಡ್ನವೀಸ್, ಅಜಿತ್ ಗೆ ಶರದ್ ಪವಾರ್ ಆಹ್ವಾನ
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್) ಅಧ್ಯಕ್ಷ ಶರದ್ ಪವಾರ್ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಗಳಾದ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಅವರಿಗೆ ಔತಣ ಕೂಟಕ್ಕೆ ಆಹ್ವಾನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಜುಲೈ 13 ರಿಂದ ಎರಡು ದಿನ ವಿಪಕ್ಷಗಳ ಮುಂದಿನ ಸಭೆ: ಶರದ್ ಪವಾರ್
ಮುಂದಿನ ವಿಪಕ್ಷಗಳ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿಂದೆ ಶಿಮ್ಸಾದಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಜುಲೈ 13 ರಿಂದ ಎರಡು ದಿನ ಮುಂದಿನ ಸಭೆ ಜರುಗಲಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ. ಇದು ವಿರೋಧ ಪಕ್ಷಗಳ ಎರಡನೇ ಸಭೆಯಾಗಿದೆ.

ಪುಣೆಯಲ್ಲಿ ಭಾನುವಾರ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ರಿಂದ ಸಿಎಂ ಸಿದ್ದರಾಮಯ್ಯಗೆ ಸನ್ಮಾನ
ಎನ್‌ಸಿಪಿ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಶರದ್ ಪವಾರ್ ನೇತೃತ್ವದಲ್ಲಿ ಧಂಗರ್ ಸಮುದಾಯವು ಭಾನುವಾರ ಪುಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಿದೆ ಎಂದು ಸಿಎಂ ಕಚೇರಿ ಅಧಿಕೃತ ಪ್ರಕಟಣೆ ತಿಳಿಸಿದೆ. ದೊರೆ ಅಹಲ್ಯಾದೇವಿ ಜನ್ಮದಿನದ ಸಂದರ್ಭದಲ್ಲಿ ಈ ಸನ್ಮಾನ ನಡೆಯಲಿದೆ.

