ದೇಶನೊಯ್ಡಾ ಲಿಫ್ಟ್ ಕುಸಿತ ದುರಂತ: ಮತ್ತೆ ನಾಲ್ವರು ಕಾರ್ಮಿಕರ ಸಾವು, ಮೃತರ ಸಂಖ್ಯೆ 8ಕ್ಕೆ ಏರಿಕೆ
ನೊಯ್ಡಾ ಎಕ್ಟೆನ್ಷನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಸೊಸೈಟಿಯಲ್ಲಿ ಸರ್ವಿಸ್ ಲಿಫ್ಟ್ ಕುಸಿದು ಬಿದ್ದು ಅದರಲ್ಲಿ ಸಿಕ್ಕಿಹಾಕಿಕೊಂಡು ತೀವ್ರ ಗಾಯಗೊಂಡಿದ್ದ ಮತ್ತೆ ನಾಲ್ವರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.