ದೇಶನಾಲ್ಕು ರಾಜ್ಯಗಳ ಶೇ.39 ಮಂದಿಗೆ ಕೋವಿಡ್ ಸಮಯದಲ್ಲಿ ನರೇಗಾ ಯೋಜನೆಯಡಿ ಒಂದು ದಿನವೂ ಕೆಲಸ ಸಿಕ್ಕಿಲ್ಲ!
ಭಾರತದ ನಾಲ್ಕು ರಾಜ್ಯಗಳಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 2020-21 ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ 2005ರ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಉದ್ಯೋಗ ಕಾರ್ಡು ಹೊಂದಿರುವ ಸುಮಾರು ಶೇಕಡಾ 39ರಷ್ಟು ಕುಟುಂಬಗಳಿಗೆ ಒಂದು ದಿನವೂ ಕೆಲಸ ನೀಡಲಾಗಿಲ್ಲ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.