ರಾಜ್ಯ2022ರ ಮೈಸೂರು ದಸರಾ ಮಹೋತ್ಸವ: ಅರಮನೆ ಆವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಮುನ್ನುಡಿ ಬರೆದಾಗಿದೆ. ಮೊನ್ನೆ ಭಾನುವಾರ ಜಂಬೂ ಸವಾರಿಯಲ್ಲಿ ಚಾಮುಂಡಿ ದೇವಿಯನ್ನು ಹೊತ್ತೊಯ್ಯುವ ಮತ್ತು ಅದರ ಹಿಂದೆ ಸಾಗುವ ಗಜಪಡೆಗಳಿಗೆ ಕಾಡಿನಿಂದ ಪೂಜೆ ನೆರವೇರಿಸಿ ನಾಡಿನತ್ತ ಕಳುಹಿಸಿದ್ದ ಗಜಪಡೆಗಳು ಇಂದು ಬುಧವಾರ ಮೈಸೂರು ಪುರವನ್ನು ಪ್ರವೇಶಿಸಿವೆ.