ರಾಜ್ಯ'ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ': ಶಾಲೆಗಳಿಗೆ ಬಂದ ಬೆದರಿಕೆ ಇಮೇಲ್ ನಲ್ಲಿ ಏನಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಇಮೇಲ್ ಬೆದರಿಕೆ ಪ್ರತಿ ಮಾಧ್ಯಮಗಳಿಗೆ ಲಭ್ಯವಾಗಿದ್ದು ಅದರಲ್ಲಿ ಭಯೋತ್ಪಾದನೆಯ ಕಪ್ಪುಛಾಯೆ ಕಾಣಿಸುತ್ತಿದೆ.