Murugesh Nirani

ಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ: ಪ್ರಿಯಾಂಕ್ ಖರ್ಗೆಗೆ ಮುರುಗೇಶ್ ನಿರಾಣಿ ತಿರುಗೇಟು
ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಇಡಿ, ಐಟಿ ದಾಳಿ ನಡೆಸುತ್ತಿದೆ. ಮುಂದೆ ನಮ್ಮ ಮೇಲೂ ರೇಡ್ ಆಗಬಹುದು ಎಂದು ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದದ್ದಕ್ಕೆ ನಿರಾಣಿ ಪ್ರತಿಕ್ರಿಯಿಸಿದರು.

ರನ್ಯಾ ರಾವ್ ಗೆ 12 ಎಕರೆ ಭೂಮಿ ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರ; ಹಣ ಪಾವತಿಸದ ಕಾರಣ ಹಸ್ತಾಂತರ ಮಾಡಿಲ್ಲ: ಎಂ.ಬಿ ಪಾಟೀಲ್
ನಿಗದಿತ ಸಮಯದೊಳಗೆ ಕಂಪನಿಯು ಅಗತ್ಯ ಮೊತ್ತವನ್ನು ಪಾವತಿಸದ ಕಾರಣ ಅಧಿಕೃತವಾಗಿ ಭೂಮಿಯನ್ನು ಹಸ್ತಾಂತರಿಸಲಾಗಿಲ್ಲ ಎಂದು ಸಚಿವರ ಎಂಬಿ ಪಾಟೀಲ್ ತಿಳಿಸಿದರು.

ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುತ್ತಾರೆ ಅಂತ ಹೇಳಲಾಗದು: ಮುರುಗೇಶ್ ನಿರಾಣಿ
ಇಂದು ನಗರದಲ್ಲಿ ಮಾಧ್ಯಮದವರೊಡನೆ ಮಾತಾಡಿದ ನಿರಾಣಿ, ಪರೋಕ್ಷವಾಗಿ ವಿಜಯೇಂದ್ರ ಕೆಲಸ ಮಾಡುತ್ತಿರುವ ವಿಧಾನವನ್ನು ಟೀಕಿಸಿದರು.

'ದನ ಕಾಯುವವನು' ಎಂದು ಹೇಳಿಲ್ಲ, ಬಾಗಲಕೋಟೆಗೆ ಬಂದು ನಿನ್ನ ಸತ್ಯಾಂಶ ಬಿಚ್ಚಿಡುವೆ: ನಿರಾಣಿಗೆ ಎಂ.ಬಿ ಪಾಟೀಲ್ ಎಚ್ಚರಿಕೆ
ದನಕಾಯುವುದು ಗೌರವದ ಕಾಯಕ. ದನಕಾಯುವವರನ್ನು ನಾನು ಗೌರವಿಸುತ್ತೇನೆ. ಮಿ. ನಿರಾಣಿ ತಾನಾಗಿಯೇ “ದನ ಕಾಯುವವ” ಎಂದು ತಿಳಿದುಕೊಂಡು, ನನ್ನ ಸಂಸ್ಥೆ ಮತ್ತು ನನ್ನ ಕುರಿತು ಏಕವಚನದಲ್ಲಿ ಕೆಟ್ಟ ಭಾಷೆ ಬಳಸಿದ್ದಾನೆ.

ತಾಕತ್ ಇದ್ದರೆ BLDE ಸಂಸ್ಥೆಯಿಂದ ಹೊರಬಂದು ಕಾರ್ಖಾನೆ ಕಟ್ಟಿ ತೋರಿಸು: ಸಚಿವ ಎಂ.ಬಿ ಪಾಟೀಲ್ ವಿರುದ್ಧ ನಿರಾಣಿ ವಾಗ್ದಾಳಿ
ಬಂತನಾಳ ಶ್ರೀಗಳು, ದಿವಂಗತ ಹಳಕಟ್ಟಿ ಸೇರಿದಂತೆ ಹಲವು ಹಿರಿಯರು ಸೇರಿ ಬಿಎಲ್ಡಿಇ ಸಂಸ್ಥೆ ಕಟ್ಟಿದ್ದಾರೆ. ಯಾರೋ ಕಟ್ಟಿರುವ ಹುತ್ತಕ್ಕೆ ಹಾವಾಗಿ ಬಂದು ಬಿಎಲ್ಡಿಇ ಸಂಸ್ಥೆ ಅಧ್ಯಕ್ಷನಾಗಿ ಮಜಾ ಮಾಡುತ್ತಿದ್ದಿಯಾ. ಸಂಸ್ಥೆಯಿಂದ ಹೊರ ಬಂದು ಸಂಸ್ಥೆ, ಕಾರ್ಖಾನೆಯನ್ನು ಕಟ್ಟು. ಅವಾಗ ನಿನ್ನ ಯೋಗ್ಯತೆ ಏನೆಂಬುದು ಗೊತ್ತಾಗುತ್ತದೆ.

ನೇಮಕಾತಿಯಲ್ಲಿ ಅಕ್ರಮ: ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ತನಿಖೆಗೆ ಅಸ್ತು; ಬಂಧನಕ್ಕೆ ನಿರ್ಬಂಧ ವಿಧಿಸಿದ ಹೈಕೋರ್ಟ್
ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಬಹುದು. ಆದರೆ, ತನಿಖೆಗೆ ಸಹಕರಿಸಿದರೆ, ಅರ್ಜಿದಾರರನ್ನು ತನಿಖಾಧಿಕಾರಿಗಳು ಬಂಧಿಸುವಂತಿಲ್ಲ ಎಂದು ನಿರ್ದೇಶಿಸಿ ಪೀಠವು ಮಧ್ಯಂತರ ಆದೇಶ ಮಾಡಿತು.

ವೈಯಕ್ತಿಕ ದಾಳಿ ನಿಲ್ಲಿಸಿ, ನಿಮ್ಮ ಕರಾಳ ರಹಸ್ಯ ಬಯಲು ಮಾಡುತ್ತೇನೆ: ಕೂಡಲಸಂಗಮ ಶ್ರೀಗೆ ಮುರುಗೇಶ್ ನಿರಾಣಿ ಎಚ್ಚರಿಕೆ
ವೈಯಕ್ತಿಕ ವಿಚಾರಗಳ ವಿಚಾರಕ್ಕೆ ಬಂದರೆ ನಿಮ್ಮ ಕರಾಳ ರಹಸ್ಯಗಳನ್ನು ಬಯಲು ಮಾಡುವುದಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಗುರುವಾರ ಎಚ್ಚರಿಕೆ ನೀಡಿದ್ದಾರೆ.

ಆಪರೇಷನ್ ಕಮಲ ಮಾಡುತ್ತಿಲ್ಲ, ಕಾಂಗ್ರೆಸ್ ಸರ್ಕಾರ ತನ್ನಷ್ಟಕ್ಕೆ ತಾನೇ ಪತನವಾಗಲಿದೆ: ಮುರುಗೇಶ್ ನಿರಾಣಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ ಬದಲಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಜಿ ಪರಮೇಶ್ವರ ಅವರ ಬಣಗಳ ಸರ್ಕಾರವಿದೆ ಎಂದು ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ ಭಾನುವಾರ ಹೇಳಿದ್ದಾರೆ.

ಹಲ್ಲೆ ಪ್ರಕರಣ: ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಎಫ್ಐಆರ್ ದಾಖಲು
ರೈತ ಮುಖಂಡ ಯಲ್ಲಪ್ಪ ಹೆಗಡೆ ಎಂಬುವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ಅವರ ಸಹೋದರ ಸಂಗಮೇಶ್ ನಿರಾಣಿ ವಿರುದ್ಧ ಬಾಗಲಕೋಟೆಯ ಮುಧೋಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

