ರಾಜ್ಯಕೊಳಚೆ ನೀರು ದುರ್ನಾತ: ಮರದಡಿ ಕುಳಿತು ಪಾಠ ಕೇಳುವ ದುಸ್ಥಿತಿಯಲ್ಲಿ ಉ.ಕ ಜಿಲ್ಲೆಯ ಹಳ್ಳೂರು ಸರ್ಕಾರಿ ಶಾಲೆ ಮಕ್ಕಳು!
ತಾಲ್ಲೂಕಿನ ಹಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ಹೊರಗೆ ಮರದಡಿಯಲ್ಲಿ ಶಿಕ್ಷಕರ ಪಾಠ ಕೇಳಬೇಕಾದ ಪರಿಸ್ಥಿತಿಯಿದೆ. ಶಾಲೆಯ ಬಳಿಯಿರುವ ತೆರೆದ ಜಾಗದಿಂದ ದುರ್ವಾಸನೆ ಬರುತ್ತಿದ್ದು, ಭವಿಷ್ಯದ ಪ್ರಜೆಗಳಾದ ಮಕ್ಕಳ ಬದುಕು ಶೋಚನೀಯವಾಗಿದೆ.