ರಾಜ್ಯಮಹಾಲಕ್ಷ್ಮೀ ಬರ್ಬರ ಹತ್ಯೆ ಪ್ರಕರಣ: ಒಡಿಶಾದಲ್ಲಿ ಕೊಲೆ ಆರೋಪಿ ನೇಣಿಗೆ ಶರಣು!
ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಮುಕ್ತಿ ರಂಜನ್ ರಾಯ್ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾನೆ ಎಂದು ವರದಿಯಾಗಿತ್ತು. ಆದರೆ ಆರೋಪಿ ಒಡಿಶಾದಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಇದೆ. ಪೊಲೀಸರು ಆರೋಪಿಯ ಜಾಡು ಹಿಡಿದು ಒಡಿಶಾಗೆ ತೆರಳಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದರು.