ರಾಜ್ಯಬೆಂಗಳೂರಿನಲ್ಲಿ ಸರಣಿ ಅಗ್ನಿ ಅವಘಡ ಘಟನೆ ಬಳಿಕ ಎಚ್ಚೆತ್ತ ಪಾಲಿಕೆ: ಸುರಕ್ಷತೆ ಇಲ್ಲದ 12 ಪಬ್, ಬಾರ್'ಗಳಿಗೆ ಬೀಗ!
ನಗರದಲ್ಲಿ ಸಂಭವಿಸಿದ ಸರಣಿ ಅಗ್ನಿ ಅವಘಡ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ನಗರದಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದರಂತೆ ಅಗ್ನಿ ಸುರಕ್ಷತೆ ಇಲ್ಲದ 12 ಪಬ್ ಹಾಗೂ ಬಾರ್ ಗಳನ್ನು ಮುಚ್ಚಿಸಿದ್ದಾರೆ. ಇನ್ನು 86ಕ್ಕೆ ನೋಟಿಸ್ ಗಳನ್ನು ಜಾರಿಗೊಳಿಸಿದ್ದಾರೆ.