ದೇಶಮಹುವಾ ಮೊಯಿತ್ರಾ ಭಾರತದಲ್ಲಿದ್ದಾಗ ಅವರ ಸಂಸದರ ಗುರುತಿನ ಚೀಟಿ ದುಬೈನಲ್ಲಿ ಬಳಕೆಯಾಗಿದೆ: ನಿಶಿಕಾಂತ್ ದುಬೆ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿಯ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಶನಿವಾರ ಹೊಸ ಆರೋಪ ಮಾಡಿದ್ದು, ಸಂಸದರೊಬ್ಬರು ಭಾರತದಲ್ಲಿದ್ದರೂ, ಅವರ ಸಂಸದರ ಗುರುತಿನ ಚೀಟಿ ದುಬೈನಲ್ಲಿ ಬಳಕೆಯಾಗಿದೆ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ತನಿಖಾ ಸಂಸ್ಥೆಗಳಿಗೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.