ರಾಜ್ಯಕೊಪ್ಪಳ: ರೈಲ್ವೆ ನಿಲ್ದಾಣದಿಂದ ಅನಧಿಕೃತ 'ಪೂಜಾ ಸ್ಥಳ' ತೆರವಿಗೆ ಬಿಜೆಪಿ ಸಂಸದ ಸಂಗಣ್ಣ ಕರಡಿ ಒತ್ತಾಯ
ಕೊಪ್ಪಳ ರೈಲು ನಿಲ್ದಾಣದಲ್ಲಿ ಅನಧಿಕೃತ ಪೂಜಾ ಸ್ಥಳವನ್ನು ತೆರವುಗೊಳಿಸುವಂತೆ ಬಿಜೆಪಿ ಸಂಸದ ಸಂಗಣ್ಣ ಕರಡಿ ನೈರುತ್ಯ ರೈಲ್ವೆಗೆ ಪತ್ರ ಬರೆದಿದ್ದಾರೆ. ಕೊಪ್ಪಳ ವಲಯಕ್ಕೆ ಹೊಸ ರೈಲುಗಳನ್ನು ಮಂಜೂರು ಮಾಡುವಂತೆಯೂ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಗೆ ಬರೆದಿರುವ ಪತ್ರದಲ್ಲಿ ಕರಡಿ ಸಂಗಣ್ಣ ಒತ್ತಾಯಿಸಿದ್ದಾರೆ.