ದೇಶಸಂಸತ್ತಿನಲ್ಲಿ ಮುಸ್ಲಿಮರ ಗುಂಪು ಹತ್ಯೆ ದಿನ ದೂರ ಇಲ್ಲ: ಬಿಧುರಿ ಹೇಳಿಕೆ ವಿರುದ್ಧ ಓವೈಸಿ ತೀವ್ರ ವಾಗ್ದಾಳಿ
ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಂಸತ್ತಿನಲ್ಲಿ ಮುಸ್ಲಿಮರ ಗುಂಪು ಹತ್ಯೆ ದಿನ ದೂರ ಇಲ್ಲ ಎಂದು ಆತಂಕ ಪಡಿಸಿದ್ದಾರೆ.