ದೇಶತಂದೆಯಿಂದಲೇ ಗುಂಡಿಗೆ ಬಲಿಯಾದ ಆಯುಷಿ! ಸೂಟ್ ಕೇಸ್ ನಲ್ಲಿ ಮೃತದೇಹ ತುಂಬಲು ತಾಯಿ ನೆರವು!
ಕಳೆದ ಶುಕ್ರವಾರ ಮಥುರಾದ ಯಮುನಾ ಎಕ್ಸ್ಪ್ರೆಸ್ ವೇ ಸರ್ವಿಸ್ ರಸ್ತೆಯಲ್ಲಿ ಟ್ರಾಲಿ ಬ್ಯಾಗ್ ವೊಂದರಲ್ಲಿ 25 ವರ್ಷದ ಆಯುಷಿ ಚೌಧರಿ ಅವರ ಮೃತದೇಹ ಪತ್ತೆಯಾಗಿತ್ತು. ಇದು ಮರ್ಯಾದಾ ಹತ್ಯೆಯಿಂದಾಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಸೋಮವಾರ ಆಕೆಯ ಪೋಷಕರನ್ನು ಮಥುರಾದಲ್ಲಿ ಬಂಧಿಸಿದ್ದಾರೆ.