ರಾಜ್ಯಬೌದ್ಧ ಧರ್ಮದ ಮುಂದಿನ ಆಧ್ಯಾತ್ಮಿಕ ನಾಯಕ 8 ವರ್ಷದ ಅಮೆರಿಕಾ-ಮಂಗೋಲಿಯನ್ ಬಾಲಕ: ಸನ್ಯಾಸತ್ವ ಅಧ್ಯಯನಕ್ಕೆ ಶೀಘ್ರದಲ್ಲೇ ಭಾರತಕ್ಕೆ?
ಮಾರ್ಚ್ 8 ರಂದು ಧರ್ಮಶಾಲಾದಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ದಲೈಲಾಮಾ ಅವರಿಂದ 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಘೋಷಿಸಿಲ್ಪಟ್ಟ ಅಮರಿಕಾ ಮೂಲದ 8 ವರ್ಷದ ಮಂಗೋಲಿಯನ್ ಬಾಲಕ ಸನ್ಯಾಸತ್ವ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.