ರಾಜ್ಯತುಮಕೂರು- ದಾವಣಗೆರೆ, ಗದಗ- ವಾಡಿ ರೈಲ್ವೆ ಯೋಜನೆಗಳಿಗೆ ರೂ. 93.32 ಕೋಟಿ ಬಿಡುಗಡೆ- ಎಂಬಿ ಪಾಟೀಲ
ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ತುಮಕೂರು, ದಾವಣಗೆರೆ ಮತ್ತು ಗದಗ- ವಾಡಿ ರೈಲ್ವೆ ಯೋಜನೆಗಳಿಗೆ ಕ್ರಮವಾಗಿ ರೂ. 50 ಮತ್ತು 43.32 ಕೋಟಿ ಸೇರಿದಂತೆ ಒಟ್ಟು ರೂ. 93.32 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಸೋಮವಾರ ತಿಳಿಸಿದ್ದಾರೆ.