ವಾಣಿಜ್ಯಆರ್ ಬಿಐ ವಿತ್ತೀಯ ನೀತಿ ಪ್ರಕಟ: ಸತತ 9ನೇ ಬಾರಿ ರೆಪೊ ದರ ಯಥಾಸ್ಥಿತಿ ಮುಂದುವರಿಕೆ
ದೇಶದಲ್ಲಿ ಕೊರೋನಾ ಮೂರನೇ ಅಲೆಯ ಆತಂಕ, ಆರ್ಥಿಕ ಅನಿಶ್ಚಿತತೆ ಮಧ್ಯೆ ಹೊಸ ರೂಪಾಂತರಿ ಕೊರೋನಾ ಓಮಿಕ್ರಾನ್ ಭಯ ಹೆಚ್ಚಾಗಿದೆ. ಈ ಮಧ್ಯೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(RBI) ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟವಾಗಿದೆ. ಸತತ 9ನೇ ಬಾರಿಗೆ ರೆಪೊ(Repo rate) ಮತ್ತು ರಿವರ್ಸ್ ರೆಪೊ ದರವನ್ನು(Reverse repo rate) ಬದಲಿಸದೆ ಯಥಾಸ್ಥಿತಿ ಮುಂದುವರಿಸಿದೆ.