ದೇಶತೆಂಗಿನ ಕಾಯಿ ಕೀಳಲು 55 ಅಡಿ ಎತ್ತರದ ಮರ ಹತ್ತಿ ನಿದ್ದೆ ಹೋದ ವ್ಯಕ್ತಿ: ಕೆಳಗಿಳಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ!
55 ಅಡಿ ಎತ್ತರದ ತೆಂಗಿನ ಮರದಲ್ಲಿ ವ್ಯಕ್ತಿಯೊಬ್ಬರು ನಿದ್ದೆಗೆ ಜಾರಿದ ಪ್ರಸಂಗ ನಡೆದಿದೆ. ವ್ಯಕ್ತಿ ನಿದ್ದೆ ಮಾಡುತ್ತಿರುವುದನ್ನು ನೋಡಿದ ಜನರು ಎಲ್ಲಿ ಬಿದ್ದುಬಿಡುತ್ತಾರೋ ಎಂಬ ಭಯದಿಂದ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿ ಅವರು ಬಂದು ಮರದಿಂದ ಇಳಿಸಿದ ಘಟನೆ ನಡೆದಿದೆ.