ರಾಜಕೀಯಪಕ್ಷದೊಳಗೆ ಶಾಸಕರ ಬೇಗುದಿ: ಆಗಸ್ಟ್ 2ರಂದು ಹೈಕಮಾಂಡ್ ಸಭೆ, ರಾಜ್ಯ ನಾಯಕರಿಗೆ ಬುಲಾವ್
ಕೈ ಶಾಸಕರ ಅಸಮಾಧಾನ ಪತ್ರದ ಬೆನ್ನಲ್ಲೇ ನಿನ್ನೆ ಬುಧವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಸಭೆಯಲ್ಲಿ ಶಾಸಕರಿಗೆ ಒಗ್ಗಟ್ಟಿನ ಪಾಠವನ್ನು ಸಿಎಂ ಸಿದ್ದರಾಮಯ್ಯ ಮಾಡಿ ಹಲವು ಕಿವಿಮಾತುಗಳನ್ನು ಹೇಳಿದ್ದಾರೆ.