ರಾಜ್ಯಶಾಸಕ ವಿಶ್ವನಾಥ್ ಹತ್ಯೆ ವಿಡಿಯೋ ಸ್ಟಿಂಗ್ ವಿಚಾರ; ಕೆದಕಿದಷ್ಟು ಹೊರಬರುತ್ತಿದೆ ರಹಸ್ಯ.. ನ.30ರ ಸಂಜೆ ಏನಾಯ್ತು!
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದ ವಿಡಿಯೋವೊಂದರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ವಿಶ್ವನಾಥ್ ವಿರುದ್ಧ ಚುನಾವಣೆಯಲ್ಲಿ ಸೋಲು ಕಂಡಿದ್ದ ಗೋಪಾಲಕೃಷ್ಣ ಹಾಗೂ ಸ್ಟಿಂಗ್ ವಿಡಿಯೋ ಮಾಡಿರುವ ನಟೋರಿಯಸ್ ಕುಳ್ಳ ದೇವರಾಜ್ ನನ್ನು ಸಿಸಿಬಿ ವಿಚಾರಣೆ ಮಾಡಿದೆ ಎನ್ನಲಾಗಿದೆ.