Missile strike

'Navigation systems ಸ್ಥಗಿತಗೊಳಿಸಿ ನಿಷೇಧಿತ ಮಾರ್ಗದಲ್ಲಿ ಸಂಚರಿಸಿದ್ದರು, ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿದ್ದರು': UAE ಹಡಗುಗಳ ಮೇಲಿನ ದಾಳಿಗೆ Iran ಸಮರ್ಥನೆ..!
ಹಡಗುಗಳು ತಮ್ಮ ನ್ಯಾವಿಗೇಶನ್ ವ್ಯವಸ್ಥೆಯನ್ನು (Navigation System) ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದ್ದವು. ಅಲ್ಲದೆ, ಗಣಿಗಳು (ಮೈನ್‌ಗಳು) ಅಳವಡಿಸಲಾಗಿದ್ದ ಮಾರ್ಗದ ಮೂಲಕ ಸಂಚರಿಸಲು ಪ್ರಯತ್ನಿಸಿದ್ದವು.

ಅಮೆರಿಕದ ಬೆದರಿಕೆಗೆ ಬಗ್ಗದ ಇರಾನ್! ಶಾರ್ಜಾದಲ್ಲಿ ದೂರ ಸಂಪರ್ಕ ಕೇಂದ್ರದ ಮೇಲೆ ಕ್ಷಿಪಣಿ ದಾಳಿ; ಇಬ್ಬರಿಗೆ ಗಾಯ!
ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಗಾಯಗೊಂಡಿದ್ದು, ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇರಾನ್ ಪ್ರತೀಕಾರ: ಇಸ್ರೇಲ್‌ನ ಬೀಟ್ ಶೆಮೆಶ್ ನಲ್ಲಿ ಕ್ಷಿಪಣಿ ದಾಳಿ, 8 ಮಂದಿ ಹತ್ಯೆ!
ಜೆರುಸಲೆಂನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಬೀಟ್ ಶೆಮೆಶ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ನಡೆಸಿದ ನೇರ ಕ್ಷಿಪಣಿ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸೇವೆಗಳು ಭಾನುವಾರ ತಿಳಿಸಿವೆ.

ಪೂರ್ವ ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಕನಿಷ್ಠ 49 ಮಂದಿ ಸಾವು
ರಷ್ಯಾ ಮತ್ತೆ ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಖಾರ್ಕಿವ್‌ನ ಪೂರ್ವ ಪ್ರದೇಶದಲ್ಲಿ ಕಿರಾಣಿ ಅಂಗಡಿ ಮತ್ತು ಕೆಫೆಯ ಮೇಲೆ ಮಾಸ್ಕೋ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 49 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು...

ಮಾಸ್ಕೋ: ಪೂರ್ವ ಉಕ್ರೇನ್‌ನಲ್ಲಿ ಕ್ಷಿಪಣಿ ದಾಳಿಗೆ 60 ರಷ್ಯಾ ಸೈನಿಕರು ಸಾವು
ರಷ್ಯಾ- ಉಕ್ರೇನ್ ನಡುವಣ ಯುದ್ಧ ಮುಂದುವರೆದಿದ್ದು, ಅಮೆರಿಕ ಒದಗಿಸಿದ ಹಿಮಾರ್ಸ್ ಸಿಸ್ಟಮ್ ಬಳಸಿಕೊಂಡು ಕೈವ್ ಪಡೆ ಪೂರ್ವ ಉಕ್ರೇನ್‌ನಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಕನಿಷ್ಠ 60 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

ನಾವು ಯುದ್ಧ ಬಯಸುವುದಿಲ್ಲ, ಆದರೆ ನಮ್ಮನ್ನು ರಕ್ಷಿಸಿಕೊಳ್ಳಲು ನೋಡುತ್ತೇವೆ: ಕ್ಷಿಪಣಿ ದಾಳಿ ಬಗ್ಗೆ ಇರಾನ್
ನಾವು ಯುದ್ಧವನ್ನು ಬಯಸುವುದಿಲ್ಲ, ಆದರೆ ಆಕ್ರಮಣಶೀಲತೆಯಿಂದ ರಕ್ಷಿಸಿಕೊಳ್ಳಲು ಬಯಸುತ್ತೇವೆ, ಹೀಗಾಗಿ ಅಮೆರಿಕಾದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದೇವೆ ಎಂದು ಇರಾನ್ ನ ವಿದೇಶಾಂಗ ಸಚಿವ ಜಾವದ್ ಜಾಫಿರ್ ಪ್ರತಿಕ್ರಿಯೆ ನೀಡಿದ್ದಾರೆ.

ಅಮೆರಿಕಾಗೆ ಉತ್ತರ ಕೊರಿಯಾ ಬೆದರಿಕೆ, ಕ್ಷಿಪಣಿ ದಾಳಿ ನಡೆಸಲು ಚಿಂತನೆ
ಅಮೆರಿಕ-ಉತ್ತರ ಕೋರಿಯಾ ನಡುವಿನ ತಿಕ್ಕಾಟ ತೀವ್ರಗೊಳ್ಳುತ್ತಿದ್ದು, ಅಮೆರಿಕಾಗೆ ಉತ್ತರ ಕೋರಿಯಾ ಬೆದರಿಕೆ ಹಾಕಿದ್ದು, ಕ್ಷಿಪಣಿ ದಾಳಿ ನಡೆಸುವುದರ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ವರದಿಗಳು ಪ್ರಕಟವಾಗಿದೆ

