ಬಾಲಿವುಡ್ತನಗೆ 2 ಬಾರಿ ಗರ್ಭಪಾತವಾಗಿತ್ತು: ಅಜಯ್ ದೇವ್ಗನ್ ಜತೆಗಿನ ದಾಂಪತ್ಯದ ಕಥೆ ಹಂಚಿಕೊಂಡ ಕಾಜೋಲ್
ಬಾಲಿವುಡ್ ನಟಿ ಕಾಜೋಲ್ ಮತ್ತು ಅಜಯ್ ದೇವ್ಗನ್ ಪರದೆಯ ಮೇಲೆ ಹಾಗೂ ಪರದೆಯಾಚೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಅತ್ಯುತ್ತಮ ಜೋಡಿ ಎನಿಸಿಕೊಂಡಿದ್ದಾರೆ. ಇದಾಗಲೇ ಇವರ ವಿವಾಹವಾಗಿ 21 ವಸಂತಗಳು ಸಂದಿದೆ. ಕಾಜೋಲ್ ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆಯೊಂದಿಗಿನ ಸಂವಾದದಲ್ಲಿ ತಮ್ಮ ಪತಿ ಅಜಯ್ ದೇವ್ಗನ್ ಅವರೊಂದಿಗೆ ತನ್ನ ಜೀವನವನ್ನು ತೆರೆದಿಟ್ಟಿದ್ದರು.