ದೇಶಮುಂದುವರಿದ ಚೀನಾ ಕುತಂತ್ರ: ಅರುಣಾಚಲ ಪ್ರದೇಶ ಗಡಿಯಲ್ಲಿ ನಾಗರಿಕರಿಗೆ ಸೇನೆಯ ಸಮವಸ್ತ್ರ ಧರಿಸಿ ಓಡಾಟ!
ಭಾರತ-ಚೀನಾ ಗಡಿಭಾಗದಲ್ಲಿ ಚೀನಾ ತನ್ನ ಸೇನಾ ಚಟುವಟಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಭಾರತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಅರುಣಾಚಲ ಪ್ರದೇಶದ ಪೂರ್ವ ವಲಯದಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ಜನರ ಚಲನವಲನಗಳನ್ನು ಚೀನಾ ಹೆಚ್ಚಿಸಿದ್ದು ಗಡಿಗೆ ಹತ್ತಿರದ ಪ್ರದೇಶಗಳ ಮೇಲೆ ಚೀನಾ ಹೆಚ್ಚಿನ ಗಮನ ಹರಿಸಿದೆ ಎಂದು ತಿಳಿದುಬಂದಿದೆ.