ದೇಶಸ್ವಾತಂತ್ರ್ಯ ದಿನಾಚರಣೆ: ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಗನ್ ಗಳು, ಎಂಐ- 17 ಹೆಲಿಕಾಪ್ಟರ್ ಬಳಕೆ!
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮ ಈ ಬಾರಿ ವಿಶೇಷವಾಗಿತ್ತು. ತ್ರಿವರ್ಣ ಧ್ವಜಕ್ಕೆ 21 ಬಾರಿ ಕುಶಾಲ ತೋಪು ಸಿಡಿಸಿ ವಂದನೆ ಸಲ್ಲಿಸಲು 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ವದೇಶಿ ಗನ್ ಗಳನ್ನು ಬಳಸಲಾಯಿತು.