ರಾಜ್ಯಕೊಡಗಿನಲ್ಲಿ ವಿದ್ಯುತ್ ಬಿಲ್ ನೀಡಲು ಬಂದಿದ್ದ ಮೀಟರ್ ರೀಡರ್ಗೆ ಚಾಕು ಇರಿತ
ಉಚಿತ ವಿದ್ಯುತ್ ಯೋಜನೆ ವಿಚಾರವಾಗಿ ಬಿಲ್ ಕಟ್ಟಲು ನಿರಾಕರಿಸುವ ಸಾರ್ವಜನಿಕರ ಮಧ್ಯೆ ಅಲ್ಲಲ್ಲಿ ಹಲ್ಲೆ ಪ್ರಕರಣಗಳೂ ವರದಿಯಾಗಿದ್ದವು. ಇದೀಗ ವಿದ್ಯುತ್ ಬಿಲ್ ಸರಿ ಇಲ್ಲ ಎಂದು ಆರೋಪಿಸಿ ಬಿಲ್ ಕಲೆಕ್ಟರ್ಗೆ ಚಾಕುವಿನಿಂದ ಇರಿದ ಆತಂಕಕಾರಿ ಘಟನೆ ಕೊಡಗಿನ ಮಾದಾಪುರದಲ್ಲಿ ನಡೆದಿದೆ.