ರಾಜ್ಯಕೊಪ್ಪಳ: ವಿದ್ಯುತ್ ಸ್ಪರ್ಶಿಸಿ ನೆನಪಿನ ಶಕ್ತಿ ಕಳೆದುಕೊಂಡ 10 ವರ್ಷದ ಬಾಲಕ; ಗುತ್ತಿಗೆದಾರನ ವಿರುದ್ಧ ದೂರು
ಜಿಲ್ಲೆಯ ಕಾರಟಗಿ ತಾಲೂಕಿನ ಮಿಲಾಪುರ ಗ್ರಾಮದಲ್ಲಿ 10 ವರ್ಷದ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ಆತ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಪ್ರಕರಣಖ್ಕೆ ಸಂಬಂಧಿಸಿದಂತೆ, ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.