ದೇಶಸಶಸ್ತ್ರ ಪಡೆ ಕಮಾಂಡರ್ ಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯೋಧ!
ಛತ್ತೀಸ್ ಘಢದ ಸಶಸ್ತ್ರಪಡೆ (ಸಿಎಎಫ್) ಕಮಾಂಡರ್ ಓರ್ವನ ಮೇಲೆ ಆತನಾಧೀನದಲ್ಲಿದ್ದ ಇನ್ನೋರ್ವ ಯೋಧ ಗುಂಡು ಹಾರಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ. ಹಾಗೆ ಕಮಾಂಡರ್ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಯೋಧ ಸಹ ಕಡೆಗೆ ತನಗೆ ತಾನು ಗುಂಡಿಕ್ಕಿಕೊಂಡು ಸಾವಿಗೀಡಾಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.