ರಾಜ್ಯಸಚಿವ ಈಶ್ವರ ಖಂಡ್ರೆ, ಡಿಕೆಶಿ ಭೇಟಿ: ಗೋದಾವರಿ, ಮೆಹಕರ್ ಸೇರಿ ಹಲವು ಯೋಜನೆಗಳ ಬಗ್ಗೆ ಚರ್ಚೆ
ಗೋದಾವರಿ ನದಿಯ ನೀರು ಬೀದರ್ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಸಮರ್ಪಕವಾಗಿ ಬಳಕೆ ಆಗಬೇಕಿದ್ದು, ನಮ್ಮ ಪಾಲಿನ 23 ಟಿ.ಎಂ.ಸಿ ನೀರು ಉಪಯೋಗಿಸಿಕೊಳ್ಳಲು ಯೋಜನೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.