ದೇಶಮೇ 15ಕ್ಕೂ ಮುನ್ನ ಲಾಕ್ ಡೌನ್ ಎಕ್ಸಿಟ್ ಕಾರ್ಯತಂತ್ರ ಹಂಚಿಕೊಳ್ಳಿ: ಮುಖ್ಯಮಂತ್ರಿಗಳಿಗೆ ಪ್ರಧಾನಿ
ಕೊರೋನಾ ತಡೆಗೆ ವಿಧಿಸಲಾಗಿರುವ ಮೂರನೇ ಹಂತದ ಲಾಕ್ ಡೌನ್ ಮೇ.17 ಕ್ಕೆ ಮುಕ್ತಾಯಗೊಳ್ಳಲಿದ್ದು, ಮೇ.15 ವೇಳೆಗೆ ಲಾಕ್ ಡೌನ್ ನಿಂದ ಹೊರಗೆ ಬರುವ ಕಾರ್ಯತಂತ್ರದ ಬಗ್ಗೆ ಸಲಹೆಗಳನ್ನು ಹಂಚಿಕೊಳ್ಳುವಂತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.