ಸಿನಿಮಾ ಸುದ್ದಿ'ಕ್ಲಿಕ್' ಚಿತ್ರದ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಪವನ್ ನಾಯಕನಾಗಿ ಪದಾರ್ಪಣೆ
ಶಶಿಕುಮಾರ್ ನಿರ್ದೇಶನದ 'ಕ್ಲಿಕ್' ಸಿನಿಮಾ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಮಗ ಮಾಸ್ಟರ್ ಪವನ್ ಬಸ್ರೂರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶರಣ್ಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಶಶಿಕಿರಣ್ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಿಸುತ್ತಿದ್ದಾರೆ.