ರಾಜ್ಯಬೆಂಗಳೂರಿನಲ್ಲಿ ಮೀನುಗಳ ಸಾಮೂಹಿಕ ಸಾವಿನಿಂದ ಲಕ್ಷಾಂತರ ರೂ. ನಷ್ಟ, ಮಾಲಿನ್ಯ: ಬಿಬಿಎಂಪಿ ಮೇಲೆ ಮೀನುಗಾರರ ಆಕ್ರೋಶ
ರಾಜಧಾನಿ ಬೆಂಗಳೂರಿನಲ್ಲಿ ಮೀನುಗಳನ್ನು ಸಾಮೂಹಿಕವಾಗಿ ಮೃತಪಟ್ಟಿರುವುದು ಮೀನುಗಾರಿಕೆ ನಡೆಸುವವರಿಗೆ ಭಾರೀ ಆಘಾತವನ್ನುಂಟುಮಾಡಿದ್ದು ಲಕ್ಷಾಂತರ ರೂಪಾಯಿ ನಷ್ಟ ಕಂಡಿದ್ದಾರೆ. ಜಲ ಮಾಲಿನ್ಯದಿಂದ ಮೀನುಗಳು ಸಾಯುತ್ತಿದ್ದು ಇದಕ್ಕೆ ಮಹಾ ನಗರಪಾಲಿಕೆ ಅಧಿಕಾರಿಗಳ ಬೇಜವಬ್ದಾರಿಯೇ ಕಾರಣ ಎಂದು ಆರೋಪಿಸುತ್ತಿದ್ದಾರೆ.