ದೇಶಜೆಎನ್ ಯು ದಾಳಿ: ಮುಸುಕುದಾರಿ ಮಹಿಳೆಯನ್ನು ಗುರುತಿಸಿದ ಪೊಲೀಸರು
ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ನಡೆದ ಹಿಂಸಾಚಾರದ ವಿಡಿಯೋದಲ್ಲಿದ್ದ ಮುಸುಕುದಾರಿ ಮಹಿಳೆಯನ್ನು ವಿಶೇಷ ತನಿಖಾ ತಂಡವೊಂದು ಗುರುತಿಸಿದೆ. ವಿಚಾರಣೆ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಆಕೆಗೆ ನೋಟಿಸ್ ಕಳುಹಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.