Marijuana

ಏರ್ ಇಂಡಿಯಾ ಟರ್ಬುಲೆನ್ಸ್: ಪೈಲಟ್ ಗಾಂಜಾ ಸೇವಿಸಿದ್ದು ದೃಢ- ವರದಿಗಳು
ವಿಮಾನ 300 ಅಡಿಗಳಷ್ಟು ಕೆಳಕ್ಕೆ ಇಳಿಯಲು ಕಾರಣವಾದ ಘಟನೆಯನ್ನು ಅಪಘಾತವೆಂದು ಪರಿಗಣಿಸಲಾಗುತ್ತಿದೆ. 17 ಜನರು ಮಾರ್ಗ ಮಧ್ಯದ ಟರ್ಬುಲೆನ್ಸ್ ನಿಂದ ಗಾಯಗೊಂಡಿದ್ದಾರೆ. ಇದನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ಮಾಡುತ್ತಿದೆ.

ಬೀದರ್: ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ರೈತನ ಬಂಧನ, 25.54 ಲಕ್ಷ ರೂ. ಮೌಲ್ಯದ ಗಿಡಗಳು ವಶಕ್ಕೆ!
ತನ್ನ ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪದ ಮೇಲೆ ಬೀದರ್ ಜಿಲ್ಲೆಯಲ್ಲಿ ರೈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 47 ವರ್ಷದ ಶಿವಾಜಿ ರಾಥೋಡ್ ಎಂಬುವವರು ವಿಜಯನಗರ ತಾಂಡಾದಲ್ಲಿರುವ ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಬಗ್ಗೆ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿತ್ತು.

ಯಾದರಿಗಿ: ಗಾಂಜಾ ಬೆಳೆದಿದ್ದ ಜಮೀನುಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರ ಬಂಧನ
ಕರ್ನಾಟಕ ಅಬಕಾರಿ ಇಲಾಖೆಯ ತಂಡಗಳು ಗುರುವಾರ ರಾಜ್ಯದ ಯಾದರಿಗಿ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವ ಕೃಷಿ ಜಮೀನುಗಳ ಮೇಲೆ ದಾಳಿ ನಡೆಸಿವೆ.

ಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರದ ಜೈಲಿನ ಮೇಲೆ ಸಿಸಿಬಿ ದಾಳಿ; ಮೊಬೈಲ್, ಗಾಂಜಾ ಪತ್ತೆ!
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಜೈಲಿನ ಮೇಲೆ ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜೈಲಿನಲ್ಲೇ ಕುಳಿತು ಪಾತಕಿಗಳು ಅಕ್ರಮ ವ್ಯವಹಾರ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಈ ದಾಳಿಯನ್ನು ಕೈಗೊಂಡಿದ್ದಾರೆ.

ಅಮೆಜಾನ್ ನಲ್ಲಿ ಡ್ರಗ್ಸ್? ಬೆಚ್ಚಿಬೀಳಿಸುವ ವಿಷಯ ಬಾಯ್ಬಿಟ್ಟ ಬಂಧಿತರು; ಈಗಾಗಲೆ 1.1 ಕೋಟಿ ರೂ. ಮೌಲ್ಯದ ಮಾದಕ ವಸ್ತು ಮಾರಾಟ!
ಮಧ್ಯಪ್ರದೇಶದ ಭಿಂಡ್ ನ ಢಾಬಾದಲ್ಲಿ ಪತ್ತೆಯಾಗಿರುವ 20 ಕೆಜಿ ಮರಿಜುನಾ (Marijuana - ಒಂದು ರೀತಿಯ ಗಾಂಜಾ ಪದಾರ್ಥ) ಸಂಬಂಧಿಸಿದಂತೆ ತನಿಖೆ ಚುರುಕು ಪಡೆದುಕೊಂಡಿದೆ. ಇಬ್ಬರು ಆರೋಪಿಗಳನ್ನು 3 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ಅಲ್ಲದೆ, ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಅಮೆಜಾನ್ ಆನ್ ಲೈನ್ ತಾಣ ಬಳಸಿ ಗಾಂಜಾ ಕಳ್ಳಸಾಗಣೆ: ಸಂಸ್ಥೆ ಪ್ರತಿಕ್ರಿಯೆ
ಶನಿವಾರ ಮಧ್ಯಪ್ರದೇಶ ಪೊಲೀಸರು ಆನ್ ಲೈನ್ ಗಾಂಜಾ ಮಾರಾಟ ಜಾಲವೊಂದನ್ನು ಭೇದಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಹುಬ್ಬಳ್ಳಿ ಗಾಂಜಾ ಮಾರಾಟ ಪ್ರಕರಣ; ಇನ್ಸ್ಪೆಕ್ಟರ್ ಸೇರಿ 7 ಮಂದಿ ಪೊಲೀಸರ ಅಮಾನತು
ಪೊಲೀಸರಿಂದಲೇ ಗಾಂಜಾ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ಸ್ಪೆಕ್ಟರ್ ಸೇರಿ 7 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬಳ್ಳಾರಿ: ಹೊಲದಲ್ಲಿ ಬೆಳೆದಿದ್ದ 1.75ಲಕ್ಷ ರೂ ಮೌಲ್ಯದ ಗಾಂಜಾ ವಶ, ಓರ್ವನ ಬಂಧನ
ಮೆಣಸಿನಕಾಯಿ ಬೆಳೆಯೊಂದಿಗೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ರೈತನೋರ್ವನನ್ನು ಪೊಲೀಸರು ಬಂಧಿಸಿ 1.75ಲಕ್ಷ ರೂ ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ: ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ 4 ಎಕರೆ ಭೂಮಿ ಜಪ್ತಿ, ಮೂವರ ಬಂಧನ
ಡ್ರಗ್ಸ್ ಮಾಫಿಯಾ ಕೊರೋನಾಗಿಂತಲೂ ಹೆಮ್ಮಾರಿಯಾಗಿ ದೇಶ, ವಿದೇಶಗಳಲ್ಲಿ ಹರಡಿಕೊಂಡಿದ್ದು, ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

