ರಾಜ್ಯಮಂಗಳೂರು ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಎಡಿಜಿಪಿ ಮುಂದೆ ಸಾಮಾಜಿಕ ಕಾರ್ಯಕರ್ತೆ ಆರೋಪ
ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ, ಕಷ್ಟ ಹೇಳಿಕೊಂಡು ನ್ಯಾಯಕೇಳಲು ಹೋಗುವ ಸಾಮಾನ್ಯ ಜನರಿಗೆ ಲಂಚಬಾಕ ಪೊಲೀಸ್ ಅಧಿಕಾರಿಗಳಿಂದ ಬಹಳ ತೊಂದರೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ನಗರ ಪೊಲೀಸ್ ಆಯುಕ್ತರ ಮುಂದೆಯೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ದೂರು ನೀಡಿರುವ ಪ್ರಸಂಗ ನಡೆದಿದೆ.