ವಿಶೇಷಜೈಲಿನ ಗೋಡೆಗಳ ಮೇಲೆ ಅರಳಿದ ಕಲೆ: ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಹೊಸ ರೂಪ ನೀಡಿದ ಕೈದಿಗಳು..!
ಜೈಲು ಎಂದರೆ ಶಿಕ್ಷೆ, ಏಕಾಂತ ಮತ್ತು ನೋವಿನ ಪ್ರತೀಕ ಎಂಬ ಸಾಮಾನ್ಯ ಕಲ್ಪನೆಗೆ ಮಂಗಳೂರು ಕೇಂದ್ರ ಕಾರಾಗೃಹ ಹೊಸ ಅರ್ಥ ನೀಡಿದೆ. ಕೈದಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಅವಕಾಶ ಕಲ್ಪಿಸಿದರೆ ಅವರ ಜೀವನದಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಈ ಪ್ರಯತ್ನ ಜೀವಂತ ಉದಾಹರಣೆಯಾಗಿದೆ.