Mandous Cyclone

ಮಾಂಡೌಸ್ ಚಂಡಮಾರುತ: ವಿಪರೀತ ಚಳಿ-ಮಳೆ, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಈಗ ಡಿಸೆಂಬರ್ ಅಂತ್ಯ, ವಿಪರೀತ ಚಳಿಯಿದೆ. ಅದರ ಜೊತಗೆ ಮಾಂಡೌಸ್ ಚಂಡಮಾರುತದಿಂದ ಕಳೆದ ಐದು ದಿನಗಳಿಂದ ರಾಜಧಾನಿಯಲ್ಲಿ ಮಳೆಯಾಗುತ್ತಿದೆ. ಚಳಿಯ ಜೊತೆ ಮಳೆಯಿಂದಾಗಿ ಬೆಂಗಳೂರಿಗರು ಗಡಗಡವಾಗಿ ನಡುಗುತ್ತಿದ್ದಾರೆ.

ಆಂಧ್ರ ಪ್ರದೇಶ: ಮಾಂಡೌಸ್ ಚಂಡಮಾರುತ ಪೀಡಿತ ಕುಟುಂಬಗಳಿಗೆ ₹ 2 ಸಾವಿರ ಆರ್ಥಿಕ ನೆರವು
ಮಾಂಡೌಸ್ ಚಂಡಮಾರುತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಆಂಧ್ರಪ್ರದೇಶ ಸರ್ಕಾರ ತಲಾ 2,000 ರೂಪಾಯಿಗಳವರೆಗೆ ಆರ್ಥಿಕ ನೆರವು ಬಿಡುಗಡೆ ಮಾಡಿದೆ. ಕುಟುಂಬಗಳು ಪುನರ್ವಸತಿ ಕೇಂದ್ರದಿಂದ ತಮ್ಮ ಮನೆಗೆ ಮರಳುವಾಗ ಈ ಹಣವನ್ನು ಪಾವತಿಸಲಾಗುವುದು ಎನ್ನಲಾಗಿದೆ.

'ಮಾಂಡೂಸ್’ ಚಂಡಮಾರುತ: ಚೆನ್ನೈ ನಗರದಾದ್ಯಂತ ಧರೆಗುರುಳಿದ ಮರಗಳು, 140 ಟನ್ ತ್ಯಾಜ್ಯ ಸಂಗ್ರಹ
ಶುಕ್ರವಾರದಂದು ಮಾಂಡೂಸ್ ಚಂಡಮಾರುತದಿಂದಾಗಿ ಸುಮಾರು 140 ಮೆಟ್ರಿಕ್ ಟನ್ ಮರದ ತ್ಯಾಜ್ಯ (ಧರೆಗುರುಳಿದ ಮರಗಳು, ಎಲೆಗಳು ಮತ್ತು ಕೊಂಬೆಗಳು) ಚೆನ್ನೈನ ಬೀದಿಗಳಾದ್ಯಂತ ಸಂಗ್ರಹವಾಗಿದೆ ಎಂದು ನಗರ ನಿಗಮದ ವರದಿ ಶನಿವಾರ ತಿಳಿಸಿದೆ.

‘ಮಾಂಡೂಸ್’ ಚಂಡಮಾರುತ: ಆಂಧ್ರ ಪ್ರದೇಶದ 6 ಜಿಲ್ಲೆಗಳಲ್ಲಿ ಭಾರಿ ಮಳೆ, ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು
ಮಾಂಡೂಸ್ ಚಂಡಮಾರುತವು ಶನಿವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಪುದುಚೇರಿ ಮತ್ತು ಶ್ರೀಕಾಳಹಸ್ತಿ ನಡುವೆ ಮಹಾಬಲಿಪುರಂ ಬಳಿ ಕರಾವಳಿಯನ್ನು ಹಾದುಹೋಗುತ್ತಿದ್ದಂತೆ, ಆಂಧ್ರ ಪ್ರದೇಶದ ಆರು ಜಿಲ್ಲೆಗಳಲ್ಲಿ ತೀವ್ರತರವಾದ ಹಾನಿಯುಂಟಾಗಿದೆ.

