Man killed wife

ಬೆಂಗಳೂರು: ತನ್ನ ಸ್ನೇಹಿತನ ಜೊತೆ ಪತ್ನಿಯ ಅನೈತಿಕ ಸಂಬಂಧ; ಬೇಸತ್ತು ನಡುರಸ್ತೆಯಲ್ಲೇ ಚೂರಿ ಇರಿದು ಹತ್ಯೆಗೈದ ಪತಿ!
ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೊಬ್ಬ ನಡುರಸ್ತೆಯಲ್ಲೇ ಪತ್ನಿಗೆ ಏಳೆಂಟು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ.

ಬೆಳಗಾವಿ: ಎರಡನೇ ಪತ್ನಿಯನ್ನು ಮೆಚ್ಚಿಸಲು ಮೊದಲ ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪತಿ ರಿಯಾಜ್!
ಧಾರವಾಡ ಮೂಲದ ಶಮಾ ಹತ್ತು ವರ್ಷದ ಹಿಂದೆ ಶಿಗ್ಗಾವಿಯ ರಿಯಾಜ್ ಪಠಾಣ್ ನನ್ನು ವಿವಾಹವಾಗಿದ್ದಳು. ದಂಪತಿಗೆ ಇಬ್ಬರು ಹೆಣ್ಣು ಹಾಗೂ ಒಬ್ಬ ಮಗ ಸೇರಿ ಮೂವರು ಮಕ್ಕಳಿದ್ದಾರೆ. ಕೆಲಸಕ್ಕೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮಕ್ಕೆ ದಂಪತಿ ಬಂದು ನೆಲಸಿದ್ದರು.

ವಿವಾಹೇತರ ಸಂಬಂಧವನ್ನು ವಿರೋಧಿಸಿದ ಪತ್ನಿ, 3 ವರ್ಷದ ಮಗಳನ್ನು ಕೊಂದ ವ್ಯಕ್ತಿ!
ತನ್ನ ಗೆಳತಿಯನ್ನು ಮದುವೆಯಾಗಲು ಆಶಿಶ್ ಸಾಂಗ್ವಾನ್ ಎಂಬಾತ ತನ್ನ ಪತ್ನಿ ಜ್ಯೋತಿ ಮತ್ತು ಎರಡು ವರ್ಷದ ಮಗಳು ಭವ್ಯಳನ್ನು ಕೊಂದು ಶವಗಳನ್ನು ಗಂಗಾನಹರ್‌ನಲ್ಲಿ ಎಸೆದಿದ್ದಾನೆ.

ಭೀಕರ ದೃಶ್ಯ: ಪತ್ನಿಯನ್ನು ಕೊಂದು ರಸ್ತೆಯಲ್ಲಿ ಶವ ಎಳೆದೊಯ್ದ ಪತಿ, ಗಾಯಗೊಂಡಿದ್ದ 9 ತಿಂಗಳ ಮಗ ಆಸ್ಪತ್ರೆಯಲ್ಲಿ ಸಾವು
ಪತ್ನಿಯನ್ನು ಹತ್ಯೆಗೈದ ಪತಿ ಆಕೆಯ ಶವವನ್ನು ಬೀದಿಯಲ್ಲಿ ಎಳೆದೊಯ್ದಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಶಿಶು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಪುರ: ಹೆಂಡ್ತಿನ ಕೊಂದು ಆಕೆ ಮನೆಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿದ!
: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಂದು ಆಕೆಯ ಮನೆಯವರಿಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.

