Man eater leopard

ಜಾರ್ಖಂಡ್: ಮಕ್ಕಳು ಸೇರಿ ನಾಲ್ವರನ್ನು ಕೊಂದಿದ್ದ ನರಭಕ್ಷಕ ಚಿರತೆಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ
ಗರ್ಹ್ವಾ ಮತ್ತು ಲತೇಹಾರ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರನ್ನು ಕೊಂದ ನರಭಕ್ಷಕ ಚಿರತೆಯ ವಿರುದ್ಧ ಜಾರ್ಖಂಡ್ ಅರಣ್ಯ ಇಲಾಖೆ ಅಂತಿಮವಾಗಿ ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ಆದೇಶವನ್ನು ಜಾರಿಗೊಳಿಸಿದೆ. ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರು ಚಿರತೆಯನ್ನು ಕೊಲ್ಲಲು ಷರತ್ತುಬದ್ಧ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.

ಛತ್ತೀಸ್‌ಗಢದಲ್ಲಿ 36 ದಿನಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಕೊನೆಗೂ 'ನರಭಕ್ಷಕ' ಚಿರತೆ ಸೆರೆ
ಬುಧವಾರ ಬೆಳಗ್ಗೆ ಮೂವರು ಗ್ರಾಮಸ್ಥರನ್ನು ಕೊಂದು ತಪ್ಪಿಸಿಕೊಂಡಿದ್ದ ನರಭಕ್ಷಕ ಚಿರತೆ ಕೊನೆಗೂ ರಾಯಪುರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಮನೇಂದ್ರಗಢದಲ್ಲಿ ಇರಿಸಲಾಗಿದ್ದ ಬೋನಿನೊಳಗೆ ಸೆರೆಯಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

