Malpe

ಉಡುಪಿ: ಹಾಡಹಗಲೇ ರೌಡಿಶೀಟರ್ ಗುಂಡಿಕ್ಕಿ ಹತ್ಯೆ, ಭದ್ರತೆ ಹೆಚ್ಚಿಸಿದ ಪೊಲೀಸರು
ಪ್ರತ್ಯಕ್ಷದರ್ಶಿಗಳು ಹೇಳುವಂತೆ ದಾಳಿಕೋರರು ಹಲವಾರು ಬಾರಿ ಗುಂಡು ಹಾರಿಸಿದ್ದಾರೆ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದಾರೆ.

ಉಡುಪಿಯ ಮಲ್ಪೆಯಲ್ಲಿ ದೋಣಿ ಮುಳುಗಿ ಅವಘಡ: ಏಳು ಮೀನುಗಾರರ ರಕ್ಷಣೆ
ಏಳು ಮಂದಿ ಮೀನುಗಾರರಿದ್ದ ದೋಣಿ ಉಡುಪಿ ಜಿಲ್ಲೆಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ಬಂಡೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಅಪಾಯ ಲೆಕ್ಕಿಸದೆ ಮುಳುಗುತ್ತಿರುವವರ ರಕ್ಷಿಸುವ ಆಪತ್ಬಾಂಧವ, ಮುಳುಗುತಜ್ಞ ಉಡುಪಿಯ ಆಕ್ವಾಮ್ಯಾನ್ ಈಶ್ವರ್ ಮಲ್ಪೆ
ಕಳೆದ 20 ವರ್ಷಗಳಿಂದ ಇದುವರೆಗೂ 20 ಮಂದಿಯನ್ನು ಸಮುದ್ರದಿಂದ ಮೇಲೆತ್ತಿ ಬದುಕಿಸಿದ್ದಾರೆ. ಅಲ್ಲದೆ 200ಕ್ಕೂ ಹೆಚ್ಚು ಮೃತದೇಹಗಳನ್ನು ಸಮುದ್ರದಿಂದ ಮೇಲೆತ್ತಿದ್ದಾರೆ.

ಉಡುಪಿ: ಮಲ್ಪೆ ಸಮುದ್ರದಲ್ಲಿ ದೋಣಿ ದುರಂತ, 7 ಮಂದಿ ರಕ್ಷಣೆ
ಮಲ್ಪೆ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರಿಕೃತ ಮೀನುಗಾರಿಕಾ ದೋಣಿ ಬುಧವಾರ ಎರಡು ನಾಟಿಕಲ್ ಮೈಲಿ ದೂರದಲ್ಲಿ ಮಗುಚಿದೆ.

ಮಲ್ಪೆ ಕಡಲತೀರದಲ್ಲಿ ತೇಲಿ ಬಂತು ರಾಶಿರಾಶಿ ಕಡಲ ತ್ಯಾಜ್ಯ!
ಮಲ್ಪೆ ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದ ಕಡಲಮಡಿ (ಕಡಲ ತ್ಯಾಜ್ಯ) ತೇಲಿ ಬಂದಿದ್ದು, ಇದು ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ ಎನ್ನಲಾಗುತ್ತಿದ್ದು, ಮೀನುಗಾರರಲ್ಲಿ ಸಂತಸವನ್ನು ಮೂಡಿಸಿದೆ. ಆದರೆ, ಈ ಜೈವಿಕ ಮೌಲ್ಯದ ಬಗ್ಗೆ ಅರಿವಿಲ್ಲದ ಕೆಲವರು ಸ್ವಚ್ಛಗೊಳಿಸುವಂತೆ ಅಧಿಕಾರಿಗಳ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ.

ಉಡುಪಿ: ದೋಣಿ ಮುಳುಗಡೆ, 6 ಮೀನುಗಾರರ ರಕ್ಷಣೆ
ಆಳ ಸಮುದ್ರದ ಮೀನುಗಾರಿಕೆಯ ನಂತರ ಮಲ್ಪೆ ಬಂದರಿಗೆ ಹಿಂದಿರುಗುವಾಗ ಆಕಸ್ಮಿಕವಾಗಿ ಬಂಡೆಗೆ ಬಡಿದ ದೋಣಿ ಮುಳುಗಿದ್ದು, ಈ ವೇಳೆ ಆರು ಮೀನುಗಾರರನ್ನು ರಕ್ಷಿಸಲಾಗಿದೆ.

ಉಡುಪಿ: ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಆಸ್ಟ್ರೇಲಿಯಾ ಏಡಿ
ಅರಬ್ಬಿ ಸಮುದ್ರದಲ್ಲಿ ಅತೀ ಅಪರೂಪ ಎನ್ನುವ ಸ್ಪ್ಯಾನರ್ ಕ್ರಾಬ್ ಉತ್ತರ ಕನ್ನಡ ಜಿಲ್ಲೆಯ ನೇತ್ರಾಣಿ ನಡುಗಡ್ಡೆ ಭಾಗದಲ್ಲಿ ಉಡುಪಿಯ ಮಲ್ಪೆ ಮೀನುಗಾರರ ಬಲೆಗೆ ಬಿದ್ದಿದೆ.

ಉಡುಪಿ: ಮಲ್ಪೆ ಬಂದರಿನಲ್ಲಿ ದುಷ್ಕರ್ಮಿಗಳಿಂದ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ತಲವಾರು ದಾಳಿ
ಫರಂಗಿಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆ ಮಲ್ಪೆ ಬಂದರಿನಲ್ಲಿ ನಡೆದಿದೆ.

ಮಲ್ಪೆಯಲ್ಲಿ ಹೈದಾರಾಬಾದ್ ವ್ಯಕ್ತಿಯ ಶವಪತ್ತೆ
ಮಲ್ಪೆ ಕೊಳದಲ್ಲಿ ಆಂಧ್ರಪ್ರದೇಶ ಮೂಲದ ಗುರುವೇಲು ಎಂಬಾತನನ್ನು ರವಿವಾರ ಅಪರಿಚಿತರು ಹೊಡೆದು ಕೊಲೆ ಮಾಡಿದ್ದಾರೆ...

