ವಿಶೇಷಗದಗ: 69 ವರ್ಷದ ಮಲ್ಲಿಕಾರ್ಜುನ ಖಂಡೆಮ್ಮನವರ್ ಗೆ ವರ್ಷಪೂರ್ತಿ ರಾಜ್ಯೋತ್ಸವ
69 ವರ್ಷ ವಯಸ್ಸಿನ ಗದಗ ಪಟ್ಟಣದ ಸಮೀಪದ ಸಣ್ಣ ಗ್ರಾಮವಾದ ಕಳಸಾಪುರದ ಮಲ್ಲಿಕಾರ್ಜುನ ಖಂಡೆಮ್ಮನವರ್ ಅವರದ್ದು ಅಕ್ಷರಶಃ ವರ್ಣರಂಜಿತ ವ್ಯಕ್ತಿತ್ವ. ಮಲ್ಲಿಕಾರ್ಜುನ ಅವರು ಹಳದಿ ಕುರ್ತಾ, ಕೆಂಪು ಪ್ಯಾಂಟ್ ಮತ್ತು ಓವರ್ಕೋಟ್ ಧರಿಸಿರುತ್ತಾರೆ. ಅಷ್ಟೇ ಅಲ್ಲ, ಅವರ ಮನೆಯನ್ನು ಕೂಡ ಕನ್ನಡಾಭಿಮಾನದ ಬಣ್ಣಗಳಲ್ಲಿಯೇ ಚಿತ್ರಿಸಲಾಗಿದೆ.