ದೇಶಫುಲ್ವಾಮಾ ದಾಳಿ: ತನಿಖೆ ಎಲ್ಲಿಗೆ ಬಂದು ತಲುಪಿದೆ? ಮಲ್ಲಿಕ್ ವರದಿ ಕುರಿತು ಪ್ರತಿಕ್ರಿಯಿಸುವಂತೆ ಪ್ರಧಾನಿಗೆ ಕಾಂಗ್ರೆಸ್ ಒತ್ತಾಯ
2019ರ ಪುಲ್ವಾಮಾ ಘಟನೆಯಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಹತ್ಯೆಗೈದ ಪ್ರಕರಣದ ತನಿಖೆಯ ಫಲಿತಾಂಶ ಕುರಿತು ಕಾಂಗ್ರೆಸ್ ಶನಿವಾರ ಕೇಂದ್ರದಿಂದ ಉತ್ತರವನ್ನು ಕೇಳಿದೆ. ಉಗ್ರರ ದಾಳಿ ಬೆದರಿಕೆಯ ಹೊರತಾಗಿಯೂ ಸಿಆರ್ಪಿಎಫ್ ಸಿಬ್ಬಂದಿಗೆ ವಿಮಾನ ನಿರಾಕರಿಸಿ, ರಸ್ತೆ ಮೂಲಕ ಸಂಚರಿಸುವಂತೆ ಏಕೆ ಮಾಡಲಾಗಿತ್ತು ಎಂದು ಪ್ರಶ್ನಿಸಿದೆ.