ದೇಶಮಾಲೇಗಾಂವ್ ಸ್ಫೋಟ ಪ್ರಕರಣದ ವಿಚಾರಣೆ ವಿಳಂಬಕ್ಕೆ ಕಾರಣ ಏನು?: ಎನ್ಐಎಗೆ ಬಾಂಬೆ ಹೈಕೋರ್ಟ್ ಪ್ರಶ್ನೆ
ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಪ್ರಮುಖ ಆರೋಪಿಯಾಗಿರುವ 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ 'ಯಾವುದೇ ಪರಿಣಾಮಕಾರಿ ಪ್ರಗತಿಯಾಗಿಲ್ಲ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ವಿಳಂಬಕ್ಕೆ ಕಾರಣ ಏನು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯನ್ನು ಪ್ರಶ್ನಿಸಿದೆ.