ದೇಶಭಾರತೀಯ ವಾಯುಪಡೆಗೆ ಸ್ವದೇಶಿ ನಿರ್ಮಿತ ಮೊದಲ ಲಘು ಯುದ್ಧ ಹೆಲಿಕಾಪ್ಟರ್ 'ಪ್ರಚಂಡ' ಸೇರ್ಪಡೆ
ದೇಶೀಯ ನಿರ್ಮಿತ ಹಗುರ ಯುದ್ಧ ಹೆಲಿಕಾಪ್ಟರ್ (LCH) ನ್ನು ಸೋಮವಾರ ಭಾರತೀಯ ವಾಯುಪಡೆಗೆ(IAH) ಸೇರಿಸಲಾಗಿದೆ. 1999ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅದರ ಅಗತ್ಯವನ್ನು ಮನಗಂಡ ನಂತರ ಮೂಲಭೂತವಾಗಿ ಪರ್ವತ ಯುದ್ಧಕ್ಕಾಗಿ ಅಭಿವೃದ್ಧಿಪಡಿಸಲಾದ ಸ್ಥಳೀಯವಾಗಿ ನಿರ್ಮಿಸಲಾದ ಲಘು ಯುದ್ಧ ಹೆಲಿಕಾಪ್ಟರ್ (LCH) ಇದಾಗಿದೆ. ಪ್ರಚಂಡ ಎಂದು ಇದಕ್ಕೆ ಹೆಸರಿಡಲಾಗಿದೆ.