ದೇಶಹಿನ್ನೋಟ 2024: ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಸಾಧನೆಗಳು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ವರ್ಷವನ್ನು ಅರ್ಥಪೂರ್ಣವಾಗಿಯೇ ಬರಮಾಡಿಕೊಂಡಿತ್ತು. ಜನವರಿ 1, 2024 ರಂದು, ಬೆಳಗ್ಗೆ 9:10ಕ್ಕೆ ಶ್ರೀಹರಿಕೋಟಾದ ಎಸ್ಡಿಎಸ್ಸಿಯಿಂದ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.