ರಾಜ್ಯಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗೆ ಟೆಸ್ಟ್ ಡ್ರೈವ್ಗೆ ಕಾರು ನೀಡಿದ ಶೋರೂಂ ಸಿಬ್ಬಂದಿ: 4 ವಾಹನಗಳು ಜಖಂ, ಓರ್ವನ ಕಾಲು ಮುರಿತ..!
ಮಹದೇವಪುರದ ಮುಖ್ಯರಸ್ತೆಯಲ್ಲಿರುವ ಮಹೀಂದ್ರಾ ಶೋರೂಂನಿಂದ ಟೆಸ್ಟ್ ಡ್ರೈವ್ಗಾಗಿ ಕಾರನ್ನು ಹೊರತರಲಾಗಿತ್ತು. ಈ ವೇಳೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದ್ದು, ವಾಹನದ ಮೇಲಿನ ನಿಯಂತ್ರಣ ತಪ್ಪಿ ಸಾಲು ಸಾಲು ವಾಹನಗಳಿಗೆ ಗುದ್ದಿದ್ದಾನೆ.