ದೇಶಭ್ರಷ್ಟಾಚಾರದಲ್ಲಿ 'ಮಹಾದೇವ'ನನ್ನೂ ಕೂಡ ಬಿಟ್ಟಿಲ್ಲ; ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ಛತ್ತೀಸ್ಗಢ ಸಿಎಂಗೆ ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಮೋಟರ್ಸ್ನಿಂದ 500 ಕೋಟಿ ರೂ. ಹಣ ಸಂದಾಯವಾಗಿದೆ ಎಂಬ ಜಾರಿನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಮಹಾದೇವ’ ಹೆಸರಿನ ಮತ್ತೊಂದು ಹಗರಣದಲ್ಲಿ ಕಾಂಗ್ರೆಸ್ ತೊಡಗಿದೆ' ಎಂದು ವಾಗ್ದಾಳಿ ನಡೆಸಿದರು.