ದೇಶ'ಮಹಾ’ ಚಂಡಮಾರುತ: ಪರಿಹಾರ ಕಾರ್ಯಾಚರಣೆಗೆ ನೌಕಾಸೇನೆ ಸಿದ್ಧ
ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ’ಮಹಾ’ ಚಂಡಮಾರುತ ತೀವ್ರಗೊಳ್ಳಲಿರುವ ಹಿನ್ನೆಲೆಯಲ್ಲಿ ಗುಜರಾತ್ ಮತ್ತು ಉತ್ತರ ಮಹಾರಾಷ್ಟ್ರ ತೀರದಲ್ಲಿ ಅಗತ್ಯ ಮಾನವೀಯ ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ಕಾರ್ಯಾಚರಣೆಯನ್ನು ಕೈಗೊಳ್ಳಲು ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾಪಡೆ ಸಿದ್ಧವಾಗಿದೆ.