ರಾಜ್ಯಗದಗ: ಮಾಗಡಿ ಕೆರೆಗೆ ವಲಸೆ ಹಕ್ಕಿಗಳ ಆಗಮನ; ಪ್ರವಾಸಿಗರು ಕೋವಿಡ್ ನಿಯಮ ಪಾಲನೆಗೆ ಗ್ರಾಮಸ್ಥರ ಒತ್ತಾಯ
ರಾಜ್ಯದ ಪ್ರಸಿದ್ಧ ವಲಸೆ ಪಕ್ಷಿಗಳ ತಾಣ ಮಾಗಡಿ ಕೆರೆಗೆ ವಲಸೆ ಹಕ್ಕಿಗಳ ಆಗಮನ ಆರಂಭವಾಗಿದೆ.. ಜಿಲ್ಲಾ ಕೇಂದ್ರದಿಂದ 26 ಕಿ. ಮೀ ದೂರದಲ್ಲಿರುವ ಮಾಗಡಿ ಕೆರೆ, ಪ್ರತಿ ವರ್ಷ ಚಳಿಗಾಲದ ಸಂದರ್ಭದಲ್ಲಿ ಬೇರೆಡೆಯಿಂದ ಸಹಸ್ರಾರು ಹಕ್ಕಿಗಳನ್ನು ಆಕರ್ಷಿಸಲಿದ್ದು, ಹಿಮಾಲಯ ವಲಯದಿಂದ ವಲಸೆ ಬರುವ ಹಕ್ಕಿಗಳು ಕೆಲ ತಿಂಗಳುಗಳ ಕಾಲ ಇಲ್ಲಿಯೇ ಇರಲಿವೆ.