Madhu swamy

ತುಮಕೂರು: ಮಾಧುಸ್ವಾಮಿ ಪರ ಬಿಎಸ್ ವೈ ಒಲವು; ದುರಹಂಕಾರಿಗಳಿಗೆ ಟಿಕೆಟ್ ಬೇಡ; ಶೋಭಾ ಹೆಸರು ತೇಲಿಬಿಟ್ಟ ಜಿ.ಎಸ್ ಬಸವರಾಜು!
ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಅವರನ್ನು ಕಣಕ್ಕಿಳಿಸಲು ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಒಲವು ತೋರಿದ್ದು, ಇದಕ್ಕೆ ಸಂಸದ ಜಿ.ಎಸ್ ಬಸವರಾಜು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಮೇಲೆ ಮುದ್ದಾಟ, ಒಳಗೊಳಗೆ ಗುದ್ದಾಟ: ಬಿಜೆಪಿ ನಾಯಕರ ಆಸ್ತಿಯಲ್ಲಿ ಕೆಪಿಟಿಸಿಎಲ್ ಕಚೇರಿ; ಜೆಡಿಎಸ್ ಶಾಸಕರ ವಿರೋಧ
2024ರ ಲೋಕಸಭೆ ಚುನಾವಣೆಗಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ, ಎರಡೂ ಪಕ್ಷಗಳ ನಾಯಕರು ಕಿತ್ತಾಡುತ್ತಲೇ ಇದ್ದಾರೆ. ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಬಿ.ಸುರೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ.

'ನಾನು ಅವನಲ್ಲ ಅವಳು' ಚಿತ್ರ ನೋಡಿಲ್ಲ: ಸಿದ್ದರಾಮಯ್ಯ; ದಿ. ಸಂಚಾರಿ ವಿಜಯ್ ರನ್ನು ಕಡೆಗಣಿಸಲಾಯಿತೇ?: ಸಚಿವ ಮಾಧುಸ್ವಾಮಿ
ಅತ್ಯಂತ ಚಿಕ್ಕವಯಸ್ಸಿನಲ್ಲೇ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ನನಗೆ ಬಹಳ ಬೇಕಾಗಿದ್ದ ಹುಡುಗ. ಪರಿಶ್ರಮದಿಂದ ನಟನಾಗಿ ಹೆಸರು ಗಳಿಸಿದ್ದರು ಎಂದು ಸಚಿವ ಮಾಧುಸ್ವಾಮಿ ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿಯವರನ್ನು ದೂರಿದರೆ ಒಳ್ಳೆಯದಾಗಲ್ಲ: ಸಚಿವ ಮಾಧುಸ್ವಾಮಿ
ಕೋವಿಡ್–19 ಲಸಿಕೆ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವವರಿಗೆ ಒಳ್ಳೆಯದಾಗುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿಯನರು ಭಾನುವಾರ ಹೇಳಿದ್ದಾರೆ.

ಸಭಾಪತಿ ಅಧಿಕಾರಕ್ಕೆ ಅಂಟಿಕೊಂಡಿದ್ದರಿಂದ ಸಮಸ್ಯೆ ಸೃಷ್ಟಿ: ಸಚಿವ ಜೆ.ಸಿ. ಮಾಧುಸ್ವಾಮಿ
ಬಹುಮತ ಇಲ್ಲದಿದ್ದರೂ ಅಧಿಕಾರದಲ್ಲಿ ಉಳಿದುಕೊಳ್ಳಲು ಸಭಾಪತಿ ಪ್ರಯತ್ನಿಸಿದ್ದರಿಂದ ಪರಿಷತ್ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮಹಿಳೆಗೆ ಶಟಪ್ ರಾಸ್ಕಲ್ ಎಂದ ಮಾಧುಸ್ವಾಮಿ: ಸಚಿವರ ದುರ್ವರ್ತನೆಗೆ ಸಿಎಂ ವಾರ್ನಿಂಗ್; ರಾಜಿನಾಮೆಗೆ ವಿಪಕ್ಷಗಳ ಆಗ್ರಹ
ರೈತ ಮಹಿಳೆಗೆ ಅಶ್ಲೀಲವಾಗಿ ನಿಂದಿಸಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ವರ್ತನೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸಚಿವರ ವರ್ತನೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಜವಾಗಿಯೂ ನಡೆದಿದ್ದು ಇದು: ಸಚಿವ ಮಾಧುಸ್ವಾಮಿ ಸ್ಪಷ್ಟನೆ
ಕುರುಬ ಸಮುದಾಯದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ಅಗೌರವ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

