M M Naravane

ಲಡಾಕ್ ನ ಫಾರ್ವರ್ಡ್ ಪ್ರದೇಶಗಳಿಗೆ ಜ.ನರವಣೆ ಭೇಟಿ: ಪರಿಸ್ಥಿತಿ ಪರಾಮರ್ಶೆ, ಸೈನಿಕರಿಗೆ ಸ್ಥೈರ್ಯ ತುಂಬಿದ ಸೇನಾ ಮುಖ್ಯಸ್ಥ
ಚೀನಾದೊಂದಿಗೆ ಗಡಿ ಸಂಘರ್ಷ ಹೊಂದಿರುವ ಪೂರ್ವ ಲಡಾಕ್ ನ ಅತಿ ಎತ್ತರದ ಫಾರ್ವರ್ಡ್ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ಒಟ್ಟಾರೆ ಮಿಲಿಟರಿ ತಯಾರಿಗಳ ಪರಾಮರ್ಶೆ ನಡೆಸಿದ್ದಾರೆ.

ಭಾರತ ಸೇನಾ ಮುಖ್ಯಸ್ಥ ನೇಪಾಳಕ್ಕೆ ಭೇಟಿ: ಉಭಯರಾಷ್ಟ್ರಗಳ ಸಂಬಂಧ ಸುಧಾರಣೆಗೆ ಒತ್ತು
ನವೆಂಬರ್ 4ರಿಂದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಅವರ ಮೂರು ದಿನಗಳ ನಿರ್ಣಾಯಕ ನೇಪಾಳ ಭೇಟಿಯು ಭಾರತದೊಂದಿಗಿನ ಹಿಮಾಲಯ ತಪ್ಪಲಿನ ರಾಷ್ಟ್ರದ ಸಂಬಂಧವನ್ನು ಸುಧಾರಿಸಲು ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. .

ಪೂರ್ವ ಲಡಾಕ್ ಸಂಘರ್ಷ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ, ಪರಿಸ್ಥಿತಿಯ ಸಮಗ್ರ ವಿಮರ್ಶೆ
ಚೀನಾ ಸೇನೆಯಿಂದ ಗಡಿ ಉಲ್ಲಂಘನೆಯ ಸತತ ಪ್ರಯತ್ನ ಮತ್ತು ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮಾಡುತ್ತಿರುವ ಪ್ರಚೋದನಕಾರಿ ವರ್ತನೆಗಳ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಸರ್ವ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮತ್ತು ಅಲ್ಲಿನ ಒಟ್ಟಾರೆ ಪರಿಸ್ಥಿತಿಗಳ ಬಗ್ಗೆ ನಿನ್ನೆ ಕೇಂದ್ರ ಸರ್ಕಾರ ಸವಿಸ್ತಾರವಾಗಿ ಪರಿಶೀಲನೆ ನಡೆಸಿದೆ.

