ರಾಜ್ಯಮತದಾರರಿಗೆ ಆಮಿಷವೊಡ್ಡಿದ್ದಕ್ಕೆ ಸಾಕ್ಷಿ ಇಲ್ಲ: ಹೈಕೋರ್ಟ್ಗೆ ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಯಾವತ್ತು, ಎಲ್ಲಿ, ಏನು ಆಮಿಷ ಒಡ್ಡಿದರು ಎಂಬುದಕ್ಕೆ ಸಾಕ್ಷ್ಯವನ್ನೇ ಒದಗಿಸದೇ ಸುಳ್ಳು ಆರೋಪ ಹೊರಿಸಿ ಅವರನ್ನು ಅನರ್ಹಗೊಳಿಸಲು ಕೋರಲಾಗಿದೆ ಎಂದು ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು.